ನಮ್ಮ ಬಗ್ಗೆ

ಈಗ ಪ್ರಸಿದ್ಧವಾಗಿರುವ "ಭಾರತ ರಾಷ್ಟ್ರೀಯ ಪತ್ರಗಾರವು 1891 ರಲ್ಲಿ "ಇಂಪೀರಿಯಲ್ ರಿಕಾಡ್ರ್ಸ್ ಇಲಾಖೆ" ಎಂಬ ಹೆಸರಿನಿಂದ ದೆಹಲಿಯಲ್ಲಿ ಪ್ರಪ್ರಥಮವಾಗಿ ಅಸ್ತಿತ್ವಕ್ಕೆ ಬಂದಿದ್ದು, ಅಂದಿನಿಂದ ಪತ್ರಾಗಾರ ಚಟುವಟಿಕೆಗಳು ಭಾರತದಲ್ಲಿ ಪ್ರಾರಂಭವಾಗಿರುತ್ತವೆ;

1950 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯವು ಚಾರಿತ್ರಿಕ ದಾಖಲೆಗಳ ಪರಿವೀಕ್ಷಣಾ ಸಮಿತಿಯನ್ನು ಸ್ಥಾಪಿಸಿದ್ದು; ದಿನಾಂಕ 3.11.1973ರಲ್ಲಿ ಕರ್ನಾಟಕ ಸರ್ಕಾರದ ರಾಜ್ಯ ಪತ್ರಗಾರ ಇಲಾಖೆಯು ಅಸ್ತಿತ್ವಕ್ಕೆ ಬಂದಿರುತ್ತದೆ.

ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯು ಕರ್ನಾಟಕ ಸರ್ಕಾರದಲ್ಲಿರುವ ವರ್ತಮಾನದ್ದಲ್ಲದ ದಾಖಲೆಗಳ ಭಂಢಾರವಾಗಿದ್ದು,ಇವುಗಳ ಉಪಯೋಗವನ್ನು ಆಡಳಿತಗಾರರು ಮತ್ತು ಸಂಶೋಧಕರು ಪಡೆದುಕೊಳ್ಳಹುದಾಗಿದೆ.

"ದಾಖಲ" ಮತ್ತು "ಅಭಿಲೇಖ" ಎಂಬ ಪದಗಳನ್ನು ಒಂದಕ್ಕೆ ಬದಲಾಗಿ ಮತ್ತೊಂದನ್ನು ಉಪಯೋಗಿಸುವ ರೂಢಿಯಿದೆ. ವ್ಯಕ್ತಿಯ ಅಥವಾ ವ್ಯವಹಾರಗಳಿಗೆ ಸಂಬಂಧಿಸಿದವು "ದಾಖಲೆ" ಗಳಾದರೆ,ಚಾರಿತ್ರಿಕ ಮೌಲ್ಯವಿದ್ದು ಶಾಶ್ವತ ಮೌಲ್ಯಗಳುಳ್ಳ ಮುದ್ರಿಸಿದ ಅಥವಾ ಕೈಬರಹದ ದಾಖಲೆಗಳು "ಅಭಿಲೇಖ" ಗಳಾಗುತ್ತವೆ.

ಪತ್ರಾಗಾರವು ಕೇವಲ ಚಾರಿತ್ರಿಕ ಮೌಲ್ಯವಿರುವ ಸರ್ಕಾರದ ದಾಖಲಾತಿಗಳಿಗೆ ಮಾತ್ರ ಸೀಮಿತವಾಗಿರದೆ, ಧಾರ್ಮಿಕ ದಾಖಲಾತಿಗಳು, ವ್ಯಾಪಾರ-ವ್ಯವಹಾರಿಕ ದಾಖಲಾತಿಗಳು,ಕೈಗಾರಿಕಾ ದಾಖಲಾತಿಗಳು ಮತ್ತು ಇತರೆ ಖಾಸಗಿ ದಾಖಲಾತಿಗಳನ್ನೂ ಸಹ ಒಳಗೊಂಡಿರುತ್ತದೆ.

Free HTML5 Bootstrap Template