ಉದ್ದೇಶಗಳು

ಕರ್ನಾಟಕ ಸರ್ಕಾರ ಸಚಿವಾಲಯದ ಎಲ್ಲಾ ದಾಖಲಾತಿ ಮತ್ತು ಕಡತಗಳನ್ನು ವೈಜ್ಞಾನಿಕವಾಗಿ ಸಂರಕ್ಷಿಸುವುದು.

ಸರ್ಕಾರದ ವಿವಿಧ ಇಲಾಖೆಗಳು ಗುರುತಿಸಿದಂತೆ ಅವಧಿ ಮೀರಿದ ಕಡತಗಳನ್ನು ಸಮಯಕ್ಕೆ ಸರಿಯಾಗಿ ನಾಶಪಡಿಸಿ ಆಡಳಿತವನ್ನು ಸುಗಮಗೊಳಿಸಲು ಸಹಕರಿಸುವುದು.

ಚಾಲ್ತಿಯಲ್ಲಿಲ್ಲದ ಮತ್ತು ರಹಸ್ಯವಲ್ಲದ ಸರ್ಕಾರಿ ದಾಖಲಾತಿ ಗಳನ್ನುಸಂಶೋಧಕರಿಗೆ,ಪಂಡಿತರಿಗೆ,ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಲಭ್ಯವಾಗುವಂತೆ ಕ್ರಮವಹಿಸಿ ಅವರ ಜ್ಞಾನಾರ್ಜನೆಗೆ ಸಹಾಯಮಾಡುವುದು.

ಸ್ವಾಯತ್ತ ಸಂಘ-ಸಂಸ್ಥೆಗಳಲ್ಲಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಹಾಗೂ ವ್ಯಕ್ತಿಗಳಲ್ಲಿರುವ ಚಾರಿತ್ರಿಕ ಮೌಲ್ಯವಿರುವ ದಾಖಲಾತಿಗಳನ್ನು ಪರಿವೀಕ್ಷಿಸುವುದು ಮತ್ತು ಅವರ ಸಹಕಾರದಿಂದ ಅವುಗಳನ್ನು ಸ್ವಾಧೀನ ಪಡಿಸಿಕೊಂಡು ವೈಜ್ಞಾನಿಕವಾಗಿ ಸಂರಕ್ಷಿಸುವುದು.

ನಶಿಸಿಹೋಗುತ್ತಿರುವ ಐತಿಹಾಸಿಕ ಮೌಲ್ಯದ ಸರ್ಕಾರಿ ಮತ್ತು ಖಾಸಗಿ ದಾಖಲಾತಿಗಳನ್ನುಮೈಕ್ರೋಫಿಲಂ ಮಾಡಿಸುವುದು ಮತ್ತು ಕಂಪ್ಯೂಟರ್-ಸ್ಕ್ಯಾನ್ ಮಾಡಿಸಿ ವೈಜ್ಞಾನಿಕವಾಗಿ ಸಂರಕ್ಷಿಸುವುದು.

ಪತ್ರಾಗಾರ ಇಲಾಖೆಯಲ್ಲಿರುವ ಮತ್ತು ಖಾಸಗಿ ಸಂಘ-ಸಂಸ್ಥೆ ಮತ್ತು ವ್ಯಕ್ತಿಗಳಲ್ಲಿರುವ ಸಾರ್ವಜನಿಕರಿಗೆ ಉಪಯೋಗವಾಗುವಂತಹ ದಾಖಲಾತಿಗಳನ್ನು ಪ್ರಕಟಿಸಿ ಅವಶ್ಯಕವಿರುವವರಿಗೆಲ್ಲಾ ಲಭ್ಯವಾಗುವಂತೆ ಮಾಡುವುದು.

ಖಾಸಗಿ ಸಂಘ-ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳಿಗೆ ಅವರಲ್ಲಿರುವ ಅಮೂಲ್ಯವಾದ ಐತಿಹಾಸಿಕ ದಾಖಲಾತಿಗಳನ್ನು ಸಂರಕ್ಷಿಸಲು ಸಲಹೆ ಮತ್ತು ತರಬೇತಿ ನೀಡುವುದು ಮತ್ತು ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಧನ ಸಹಾಯಕ್ಕೆ ಶಿಫಾರಸ್ಸು ಮಾಡುವುದು.

ಪತ್ರಾಗಾರದಲ್ಲಿ ಆಳವಾದ ಜ್ ಞಾನ ಮತ್ತು ಆಸಕ್ತಿ ಇರುವ ಖಾಸಗಿ ಸಂಘ-ಸಂಸ್ಥೆಗಳ ಮತ್ತು ವ್ಯಕ್ತಿಗಳ ಸಹಕಾರದೊಂದಿಗೆ ಎಲ್ಲೆಲ್ಲಿ ಅಮೂಲ್ಯವಾದ ಖಾಸಗಿ ದಾಖಲಾತಿಗಳಿವೆಯೋ ಅವುಗಳನ್ನು ಪರಿವೀಕ್ಷಣೆ ಮೂಲಕ ಪತ್ತೆಹಚ್ಚಿ ಸಮಾಜದ ಉಪಯೋಗಕ್ಕಾಗಿ ಅವುಗಳ ಸಂರಕ್ಷಣೆಗೆ ಸಹಾಯಮಾಡುವುದು.

Free HTML5 Bootstrap Template